ನೆನಪು
ಏಳುತ್ತಿದೆ- ಬೀಳುತ್ತಿದೆ , ಮುಳುಗಿತ್ತಿದೆ - ತೇಲುತ್ತಿದೆ ,
ನೆನಪು ಈ ಹುಚ್ಚು ಮನದಲಿ.
ಸಾಗರದ ಹವಳವೂ ಹಿಡಿಸದಾಗಿದೆ,
ಹುಣ್ಣಿಮೆಯ ಸಾರದ ಹಿಗ್ಗು ಬೇಡವಾಗಿದೆ ,
ತಂಪು ತೀರದ ತಂಗಾಳಿ ಹಿತ ಕೊಡದಾಗಿದೆ ,
ಶಿಥಿಲವಾಗಿರಬೆಕೆನ್ನುತ್ತಿದೆ ನೆನಪಿನಲಿ ಈ ಮನ ..
ಕರಾಳ ಕತ್ತಲಿದ್ದರೂ , ಮಿಣುಕು ದೀಪವನ್ನೂ ಸಹಿಸದಾಗಿದೆ ,
ಸುರಿವ ಮಳೆಯಲ್ಲಿ ತೊಯ್ಯುತ್ತಿದ್ದರೂ ಸೂರಿನಾಸರೆ ಒಲ್ಲೆಯೆನ್ನುತ್ತಿದೆ ,
ಒಂಟಿಯಾಗಿರುವ ಜೀವನದಲಿ ಸಂಗಾತಿಯಾಸರೆ ಸೇರದೆಂದಿದೆ ,
ಸುಮ್ಮ ಜಡವಾಗಿರಬೆಕೆನ್ನುತ್ತಿದೆ ನೆನಪಿನಂಗಳದಲಿ , ಈ ಮನ .

No comments:
Post a Comment